1right and left
ಕ್ರಿಯಾವಿಶೇಷಣ
  1. ಬಲಕ್ಕೂ ಎಡಕ್ಕೂ; ಎರಡು ಕಡೆಗೂ: the crowd divided right and left ಗುಂಪು ಎರಡು ಕಡೆಗೂ ವಿಭಾಗಗೊಂಡಿತು.
  2. ಎಲ್ಲಾಕಡೆಯೂ ಯಾ ಎಲ್ಲ ಕಡೆಯಿಂದಲೂ: he was abused right and left ಎಲ್ಲಾ ಕಡೆಯಿಂದಲೂ ಬೈಗುಳ ತಿಂದ; ಅವನನ್ನು ಎಲ್ಲ ಕಡೆಯವರೂ ಬೈದರು.
2right and left
ಗುಣವಾಚಕ

ಎರಡೂ ಕೈಯ; ಎರಡೂ ಕಡೆಯ: a right and left shot ಬಂದೂಕಿನ ಎರಡೂ ನಳಿಕೆಗಳಿಂದ ಹಾರಿಸಿದ ಗುಂಡು. right and left screw ಬಲ ಎಡ ಸುತ್ತುಗಳ ತಿರುಪುಮೊಳೆ; ಒಂದು ತುದಿಯಲ್ಲಿ ಬಲಸುತ್ತುಗಳೂ ಮತ್ತೊಂದು ತುದಿಯಲ್ಲಿ ಎಡ ಸುತ್ತುಗಳೂ ಇರುವ, ತಿರುಪು ಮೊಳೆ.

3right and left
ನಾಮವಾಚಕ
  1. ಎರಡೂ ನಳಿಕೆಗಳಿಂದ ಹಾರಿಸಿದ ಗುಂಡು.
  2. ಮುಷ್ಟಿಮಲ್ಲನ ಎಡ ಬಲ ಕೈ ಗುದ್ದುಗಳು; ಮುಷ್ಟಿಮಲ್ಲನು ಎಡಗೈ ಬಲಗೈಗಳಿಂದ ಒಂದಾದಮೇಲೆ ಒಂದರಂತೆ ಹೊಡೆಯುವ ಎರಡು ಗುದ್ದುಗಳು.